Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜೀವನ್ಮುಖಿಗೆ ೩೦೦ರರ ಸಂಭ್ರಮ`
Posted date: 9/December/2008

ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುವ ಮಹಿಳೆಯರ ಅಚ್ಚು ಮೆಚ್ಚಿನ ಕಾರ್ಯಕ್ರಮವೇ ’ಜೀವನ್ಮುಖಿ’.ಇದು ಮಹಿಳೆಯರಿಂದ ಮಹಿಳೆಯರಿಗಾಗಿಯೇ ಇರುವ ವಿಶೇಷ ಕಾರ್ಯಕ್ರಮ. ವೈದ್ಯರ ಮೂಲಕ ಅರಿವು ಮೂಡಿಸುವ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿನ ಆಗು-ಹೋಗುಗಳ, ಅವಕಾಶಗಳ ಬಗ್ಗೆ ನಿಖರ ಮಾಹಿತಿ ನೀಡುತ್ತಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೧೦:೩೦ರಿಂದ ೧೧:೦೦ ಗಂಟೆಯವರೆಗೆ ಪ್ರಸಾರವಾಗುವ ’ಜೀವನ್ಮುಖಿ’ ಕಾರ್ಯಕ್ರಮವು ಇದೇ ೮ರಂದು ೩೦೦ನೇ ಕಂತಿನತ್ತ ಹೆಜ್ಜೆ ಹಾಕುತ್ತಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರ ಕುರಿತಂತೆ ಅವರೊಂದಿಗಿನ ಮಾತುಕತೆ, ಬ್ಯೂಟಿ ಪಾರ್ಲರ್ ಮಾಹಿತಿ, ದಢೂತಿ ದೇಹದ ಮಹಿಳೆಯರಲ್ಲಿ ಹೇರಳವಾಗಿ ಕಾಣಿಸುವ ಬೊಜ್ಜಿನ ಸಮಸ್ಯೆಯ ಬಗ್ಗೆ ಮಾಹಿತಿ, ಹಾಗೂ ಹಿರಿಯ ನಾಗರೀಕರಿಗೆ ಉಪಯೋಗ ಆಗುವಂತಹ ವೃದ್ಧಾಶ್ರಮಗಳ ಬಗ್ಗೆ ಮಾಹಿತಿ ನೀಡುವಲ್ಲಿಎತ್ತಿದ ಕೈ.

ಈಗಾಗಲೇ ಅಪಾರ ಜನಪ್ರಿಯವಾದ ಈ ಕಾರ್ಯಕ್ರಮ ಮುಂದಿನ ಪೀಳಿಗೆಗೆ ಉಪಯೋಗವಾಗುವಂತ ಆನಿಮೇಷನ್ ಬಗ್ಗೆ ಮಾಹಿತಿ ನೀಡುತ್ತಿದ್ದು, ನಗರದಲ್ಲಿ ನಡೆಯುವ ವಸ್ತುಪ್ರದರ್ಶನಗಳ ಬಗ್ಗೆ ಮಾಹಿತಿ ನೀಡುತ್ತಾ, ಮಹಿಳೆಯರ ಅಚ್ಚು ಮೆಚ್ಚಿನ ಆಭರಣ ವಿನ್ಯಾಸ ಮತ್ತು ಮುಖದ ಕಾಂತಿ ಹೆಚ್ಚಿಸುವ ಹೊಸ ವೈದ್ಯಕೀಯ ಆವಿಷ್ಕಾರದ ಬಗ್ಗೆ ನಿಖರ ಮಾಹಿತಿ ನೀಡುತ್ತಿದೆ.

ಮಾನವನ ಜೀವನಕ್ಕೆ ಶಾಪವಾಗಿ ಕಾಡುವ ಬೊಜ್ಜಿನ ಸಮಸ್ಯೆ ನಿವಾರಣೆಗೆ ಉಪಯೋಗವಾಗುವಂತೆ ಹಲವು ಜಿಮ್‌ಗಳ ಬಗ್ಗೆ ನಿಖರವಾದ ಮಾಹಿತಿ ನೀಡುತ್ತಿದೆ. ಕಸದಿಂದ ರಸ ಮಾಡುವ ವಿಧಾನ ಹಾಗೂ ಗೃಹೋಪಯೋಗಿ ವಸ್ತುಗಳ ಉಪಯೋಗದ ಬಗ್ಗೆ ವೀಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದು, ಯುವಕ ಯುವತಿಯರು ತಮ್ಮ ಅಲಂಕಾರಕ್ಕಾಗಿ ಬಳಸುವ ವಿವಿಧ ರೀತಿಯ ಟ್ಯಾಟೊಗಳ ಬಗ್ಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ.

ಈ ಕಾರ್ಯಕ್ರಮವು ಎಲ್ಲಾ ರೀತಿಯಲ್ಲಿ ಮಹಿಳೆಯರಿಗೆ ಮಾರ್ಗದರ್ಶನವಾಗಿದೆ. ಪ್ರತಿಭೆ, ಛಲ ಹಾಗೂ ದಿಟ್ಟತನದಿಂದ ಮಹಿಳೆ ಸಮಾಜದಲ್ಲಿ ಜೀವನವನ್ನು ಎದುರಿಸಿ ಸ್ವಾವಲಂಭಿಯಾಗಿ ಬಾಳಲು ಇದು ಇಂದು ಉತ್ತಮ ಮಾರ್ಗದರ್ಶಿ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮದ ನಿರ್ದೇಶನ ಹಾಗೂ ನಿರೂಪಕಿಯಾಗಿ ಸುಷ್ಮಾ ಮಂಜುನಾಥ್‌ವರು ನಡೆಸಿಕೊಡುತ್ತಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜೀವನ್ಮುಖಿಗೆ ೩೦೦ರರ ಸಂಭ್ರಮ` - Chitratara.com
Copyright 2009 chitratara.com Reproduction is forbidden unless authorized. All rights reserved.